ವಿಜಯಪುರ: ಬೆಂಗಳೂರಿನಲ್ಲಿ ಡಿಸೆಂಬರ್ 18ಕ್ಕೆ ಬಿಜೆಪಿ ಪ್ರಕೋಷ್ಠಗಳ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಕೋಷ್ಟಗಳ ಸಹ ಸಂಯೋಜಕ ಜಯತೀರ್ಥ ಕಟ್ಟಿ ಹೇಳಿದರು.
ವಿಜಯಪುರ ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿವಿಧ 24 ಪ್ರಕೋಷ್ಠಗಳಿದ್ದು, ಎಲ್ಲ ಪ್ರಕೋಷ್ಠಗಳು ಸೇರಿ 50 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಎಲ್ಲರನ್ನೂ ಸೇರಿಸುವ ಉದ್ದೇಶದಿಂದ ಶಕ್ತಿ ಸಂಗಮದ ಹೆಸರಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಚಿವ ಅಶ್ವಿನಿ ವಷ್ಣವಿ ಉದ್ಘಾಟನೆ ನೆರವೇರಿಸುವರು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಗವಹಿಸುವರು. ಬಿ.ಎಲ್. ಸಂತೋಷ ಸಮಾರೋಪ ಭಾಷಣೆ ಮಾಡುವರು ಎಂದರು.
ಡಿ.15ಕ್ಕೆ ರಾಜ್ಯದ 10 ಬಿಜೆಪಿ
ಜಿಲ್ಲಾ ಕಾರ್ಯಾಯಗಳ ಉದ್ಘಾಟನೆ ನೆರವೇರಿಲಿವೆ. ರಾಷ್ಟ್ರೀಯ ನಾಯಕ
ಜೆ.ಪಿ.ನಡ್ಡಾ ವರ್ಚ್ಯುಯಲ್ ಮೂಲಕ ಉದ್ಘಾಟನೆ ನೆರವೇರಿಸುವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾಹಿತಿ ನೀಡಿದರು.