ಬಾಗಲಕೋಟ: ನಿತ್ಯ ಕುಡಿದು ಜಗಳ ಮಾಡುತ್ತಿದ್ದ ಎಂಬ ಕಾರಣಕ್ಕೆ ಹೆತ್ತ ತಂದೆಯನ್ನೇ ಬರ್ಬರವಾಗಿ ಮಗ ಹತ್ಯೆಗೈದು ನಿರುಪಯುಕ್ತ ಬೋರವೆಲ್ನಲ್ಲಿ ಹಾಕಿರುವ ಘಟನೆ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಜಂಜರಕೊಪ್ಪ ಗಲ್ಲಿಯಲ್ಲಿ ನಡೆದಿದೆ.
ಪರಶುರಾಮ (54) ಕೊಲೆಯಾದ ತಂದೆ. ಇನ್ನೂ ಪಾಪಿ ಮಗ ವಿಠ್ಠಲ ಆರೋಪಿಯಾಗಿದ್ದಾನೆ.
ನಿತ್ಯ ಕುಡಿತದಿಂದ ಜಗಳವಾಡುತ್ತಿದ್ದನೆಂಬ ಹಿನ್ನೆಲೆಯಲ್ಲಿ ತಂದೆಯನ್ನೇ ಕೊಡಲಿಯಿಂದ ಹೊಡೆದು ತುಂಡು ತುಂಡಾಗಿ ಕತ್ತಿರಿಸಿ ಬೋರ್ವೆಲ್ನಲ್ಲಿ ಕಳೆದ ಡಿಸೆಂಬರ್ 7ರಂದು ನಡೆದಿದೆ. ಮುಧೋಳ ಪೋಲಿಸರಿಂದ ತನಿಖೆ ಮುಂದವರೆದಿದೆ. ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.