ಬಾಗಲಕೋಟ: ತಂದೆಯ ಹತ್ಯೆಗೈದಿದ್ದ ಮಗನ ಕೇಸ್ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. 50 ಸಾವಿರ ಹಣಕ್ಕಾಗಿ ತಂದೆಯನ್ನೆ ಮಗ ಹತ್ಯೆಗೈದು ಬರೋಬ್ಬರಿ 30 ಪೀಸ್ ಮಾಡಿ ಹೊಲದಲ್ಲಿರುವ ನಿರುಪಯುಕ್ತ ಬೋರ್ವೆಲ್ಗೆ ಹಾಕಿದ್ದಾನೆ.
ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಜಂಜರಕೊಪ್ಪ ಗಲ್ಲಿಯಲ್ಲಿಯ ಪರಶುರಾಮ ಕುಳಲಿ (54) ಕೊಲೆಯಾದ ತಂದೆ. ಇನ್ನೂ ಪಾಪಿ ಮಗ ವಿಠ್ಠಲ ಕುಳಲಿ ಆರೋಪಿಯಾಗಿದ್ದಾನೆ.
ಹಣಕ್ಕಾಗಿ ತಂದೆ ಮಗನ ಮಧ್ಯೆ ಜಗಳವಾಗಿದೆ. ಅದಕ್ಕಾಗಿ ತಂದೆಯನ್ನೇ ಕೊಡಲಿಯಿಂದ ಹೊಡೆದು ತುಂಡು ತುಂಡಾಗಿ ಕತ್ತಿರಿಸಿ ಬೋರ್ವೆಲ್ನಲ್ಲಿ ಕಳೆದ ಡಿಸೆಂಬರ್ 7ರಂದು ನಡೆದಿದೆ. ಮುಧೋಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.