ಹಾವೇರಿ: ಹೋರಿ ತಿವಿದ ಪರಿಣಾಮ ಯುವಕ ಅಸುನೀಗಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದಿದೆ. 29 ವರ್ಷದ ಮಂಜುನಾಥ ಮೈಲಾರಪ್ಪ ಚಳ್ಳಕ್ಕನವರ ಮೃತಪಟ್ಟಿರುವ ದುರ್ದೈವಿ. ಚಿಕ್ಕಬಾಸೂರು ಗ್ರಾಮಕ್ಕೆ ಹೋರಿ ಹಬ್ಬ ನೋಡಲು ಹೋಗಿದ್ದ ವೇಳೆ ವೇಗವಾಗಿ ಓಡಿ ಬಂದ ಹೋರಿ ಯುವಕನ ಎಡ ಪಕ್ಕೆಗೆ ತಿವಿದಿದೆ. ಅದಕ್ಕಾಗಿ ಯುವಕ ಸಾವನ್ನಪ್ಪಿದ್ದಾನೆ.