ಕೊಪ್ಪಳ: ರಾಜಕೀಯ ಭವಿಷ್ಯದಲ್ಲಿ ಸಕ್ರೀಯವಾಗಿ ತೊಡಗಲೆಂದು ಮಾಜಿ ಸಚಿವ ಜನಾರ್ಧನರೆಡ್ಡಿ ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಗೃಹ ಪ್ರವೇಶ ನಡೆಸಿದರು. ಕಾರಟಗಿ ರಸ್ತೆಯಲ್ಲಿ ವಿನೋದ್ ಸುರಾನಾ ಅವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದಿದ್ದು. ಇಂದು ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರು ಪೂಜಾ ವಿಧಿ ವಿಧಾನಗಳ ಮೂಲಕ ಗೃಹ ಪ್ರವೇಶ ನಡೆಸಿದರು.
ಬಳ್ಳಾರಿಯಿಂದಲೇ ತೆರಳಿದ್ದ ಪುರೋಹಿತರ ತಂಡ ಹೋಮ, ಪೂಜೆಗಳನ್ನು ನೆರವೇರಿಸಿತು.
ಈ ಸಂದರ್ಭದಲ್ಲಿ ರೆಡ್ಡಿ ಇರಲಿಲ್ಲ. ಅವರು ಬಿಜೆಪಿ ಪಕ್ಷ ತಮ್ಮನ್ನು ಪಕ್ಷಕ್ಕೆ ಆಹ್ವಾನಿಸದೇ ಇದ್ದರೆ. ಹೊಸ ಪಕ್ಷದ ಚಿನ್ಹೆಯಿಂದಲೇ ಗಂಗಾವತಿಗೆ ಬಂದು ಗೃಹ ಪ್ರವೇಶ ಮಾಡುತ್ತಾರೆ ಎಂಬ ವಿಷಯವನ್ನು ಅವರ ಬೆಂಬಲಿಗರು ವ್ಯಕ್ತಪಡಿಸುತ್ತಿದ್ದಾರೆ.ಈ ತಿಂಗಳ 18 ರೊಳಗೆ ಬಿಜೆಪಿಯ ಪ್ರತಿಕ್ರಿಯೆ ನೋಡಿಕೊಂಡು ಹೊಸ ಪಕ್ಷ ನೋಂದಣಿ ಮಾಡಿಸಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ 2023 ರ ಚುನಾವಣೆಯಲ್ಲಿ ತಾವು ಸಕ್ರೀಯರಾಗಿರಬೇಕು ಎಂಬುದು ರೆಡ್ಡಿಯ ಆಶಯವಾಗಿದೆಯಂತೆ. ಅದಕ್ಕಾಗಿ ಅವರು ಬಿಜೆಪಿ ಇಲ್ಲದಿದ್ದರೆ. ಹೊಸ ಪಕ್ಷ, ಗುಂಪಿನೊಂದಿಗೆ ಚುನಾವಣೆ ಎದುರಿಸುವ ತಂತ್ರಗಾರಿಕೆ ಹೊಂದಿದ್ದು. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಗಿದ್ದಾರಂತೆ ಎನ್ನುವ ಮಾತುಗಳು ಕೇಳಿಬಂದಿವೆ.