ವಿಜಯಪುರ: ಅಕ್ರಮವಾಗಿ ಸಂಗ್ರಹಿಸಿದ ಒಣ ಗಾಂಜಾ ಮಾಹಿತಿ ಆಧರಿಸಿ ಅಬಕಾರಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ. ಗೋವಿಂದಪುರ ಗ್ರಾಮದ ನಿವಾಸಿ ಪಂಚು ಬಾಬು ಬಿರಾದಾರ ಬಂಧಿತ ಆರೋಪಿ. ಇನ್ನು 38 ಸಾವಿರ ಮೌಲ್ಯದ 910 ಗ್ರಾಂ ಒಣಗಿದ ಗಾಂಜಾ ಜಪ್ತಿಗೈದಿದ್ದಾರೆ. ಆರೋಪಿ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ. ಅಬಕಾರಿ ಉಪ ನಿರೀಕ್ಷಕಿ ಪರೀನಾ ವನಕ್ಯಾಳ ಮಾಹಿತಿ ಆಧರಿಸಿ ಸಿಬ್ಬಂದಿಗಳು ದಾಳಿಗೈದಿದ್ದಾರೆ. ಕಾರ್ಯಾಚರಣೆಯಲ್ಲಿ ಅಶೋಕ ಘೋಣಸಗಿ, ಶಿವಾನಂದ ಕೊಡತೆ, ಸಂಜಯ್ ಕುಲಕರ್ಣಿ ಸೇರಿದಂತೆ ಸಿಬ್ಬಂದಿಗಳು ಇದ್ದರು.