ವಿಜಯಪುರ: ಭಾರತೀಯ ರಿಸರ್ವ್ ಬಟಾಲಿಯನ್ ವಿಜಯಪುರದಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ ರೋಹಿದಾಸ್ ಕೊಡತೆ(38) ಕಾಮಾಲೆ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಕೊನೆಯೂಸಿರೇಳೆದಿದ್ದಾರೆ.
ಮೃತ ಐ.ಆರ್.ಬಿ ಮುಖ್ಯಪೇದೆ ಸುರೇಶ ಕೊಡತೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗಡಿಭಾಗದ ಧೂಳಖೇಡ ಗ್ರಾಮದ ಸುರೇಶ 2008 ರಿಂದ ಭಾರತೀಯ ರಿಸರ್ವ್ ಬಟಾಲಿಯನ್ ನಲ್ಲಿ 16 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ವಗ್ರಾಮ ಧೂಳಖೇಡದಲ್ಲಿ ಶುಕ್ರವಾರ ಐ.ಆರ್.ಬಿ ವಿಜಯಪುರ ಹಾಗೂ ಝಳಕಿ ಪೋಲಿಸ್ ಠಾಣೆಯಿಂದ ಅಗಲಿದ ಮುಖ್ಯಪೇದೆ ಸುರೇಶ ಕೊಡತೆಗೆ ಸರ್ಕಾರಿ ಸಕಲ್ ಗೌರವ ವಂದನೆ ಸಲ್ಲಿಸಿ, ವಿಧಿ-ವಿಧಾನಗಳೊಂದಿಗೆ ರುದ್ರುಭೂಮಿಯಲ್ಲಿ ಅಂತ್ಯಕ್ರಿಯೆ ಕುಟುಂಬಸ್ಥರು ನೇರವೇರಿಸಿದರು.