ಚಿತ್ರದುರ್ಗ: ಹಿರೆಕೆರೆಯಲ್ಲಿ ತಾಯಿ-ಇಬ್ಬರೂ ಮಕ್ಕಳ ಆತ್ಮಹತ್ಯೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಹಿರೆಕೆರೆಯಲ್ಲಿ ಕೆರೆ ತೋರಿಸುವ ನೆಪದಲ್ಲಿ ಪಾಪಿ ಪತಿ ಹೆಂಡ್ತಿ – ಮಕ್ಕಳನ್ನ ನೀರಿಗೆ ತಳ್ಳಿ ಕೊಲೆಗೈದಿದ್ದಾನೆ. ಹಿರೇಹಳ್ಳಿ ಗ್ರಾಮದ ಮಲ್ಲಿಕಾರ್ಜುನ್ ವಿರುದ್ದ IPC 114 & 302 ಕೇಸ್ ದಾಖಲು ಆಗಿದೆ.
ಘಟನೆ ವಿವರ
ಪತ್ನಿ ದುರ್ಗಮ್ಮ, ಮಗ ಅಜಯ್, ಮಗಳು ಸೇವತಿಯನ್ನು ಕೆರೆ ತೋರಿಸುವ ನೆಪದಲ್ಲಿ ಕೆರೆಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ನೀರಿಗೆ ತಳ್ಳಿ ಕೊಲೆ ಮಾಡಿದ ಪಾಪಿ ಪತಿ ಕೊಲೆಗೈದಿದ್ದಾನೆ. ಇದು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆರೆಗೆ ತಳ್ಳಿ ಕೊಲೆ ಮಾಡಿದ್ದನ್ನು ಆರೋಪಿ ಮಲ್ಲಿಕಾರ್ಜುನ್ ಪೊಲೀಸ ತನಿಖೆಯಲ್ಲಿ ಬಾಯಿಬಿಟ್ಟಿದ್ದಾನೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.