ವಿಜಯಪುರ: ರಸ್ತೆ ಮಧ್ಯೆ ಬಂದ್ ಬಿದ್ದಿದ ಕಾರನ್ನು ಟ್ರಾಫಿಕ್ ಪೊಲೀಸರೊಬ್ಬರು ತಳ್ಳುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ವಿಜಯಪುರ ನಗರದ ಗಾಂಧಿಚೌಕ್ ಸರ್ಕಲ್ನಲ್ಲಿ ನಡೆದಿದೆ. ಗಾಂಧಿಚೌಕ್ ಸರ್ಕಲ್ನಲ್ಲಿರುವ ಟ್ರಾಫಿಕ್ ಸಿಗ್ನಲ್ನಲ್ಲಿ ಏಕಾಏಕಿ ಕಾರು ಬಂದ್ ಬಿದ್ದಿದೆ. ಇದರಿಂದ ಉಳಿದ ಸವಾರಿಗೆ ತೊಂದರೆ ಆಗುತ್ತಿತ್ತು. ಅದಕ್ಕಾಗಿ ಟ್ರಾಫಿಕ್ ಪೊಲೀಸ ಸಿದ್ದು ಜಟ್ನಾಳ್ ಕಾರು ತಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.