ವಿಜಯಪುರ: ತೆನೆ ಇಳಿಸುವ ಪ್ರಶ್ನೆನೆ ಇಲ್ಲ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ನಾನು ಓಡಿ ಹೋಗಿ ಕಾಂಗ್ರೆಸ್, ಬಿಜೆಪಿ ಸೇರುವುದಿಲ್ಲ. ನಾನು ಜೆಡಿಎಸ್ ಪಕ್ಷ ತೊರೆಯುವ ಪ್ರಶ್ನೆನೆ ಬಂದಿಲ್ಲ. ನಾನು ಜೆಡಿಎಸ್ನಲ್ಲಿ ಇರುತ್ತೇನೆ. ನಾನೇನು ಹೇಳದೆ ಓಡಿ ಹೋಗಲ್ಲ. ಅದಕ್ಕಾಗಿ ಯಾರು ಊಹಾಪೋಹಗಳಿಗೆ ಕಿವಿ ಕೊಡಬಾರದು ಎಂದರು.