ಬಾಗಲಕೋಟ: ವಿಧನಾಸಭಾ ಚುನಾವಣೆಯಲ್ಲಿ ನನ್ನ ಮತಕ್ಷೇತ್ರಕ್ಕೆ ಹಣ(Money) ಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದರು.
ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಮಾತನಾಡಿದ ಅವರು, ಈ ಸಲ ವಿಧಾನಸಭೆ ಚುನಾವಣೆಗೆ ನನ್ನ ಕ್ಷೇತ್ರದ ಜನರು ಸಮೃದ್ಧಿ ಇರ್ತಾರೆ. 15 ದಿನ ವಿಜಯಪುರ ಕ್ಷೇತ್ರದಲ್ಲಿ ಸಾಕಷ್ಟು ದುಡ್ಡು ಓಡಾಡ್ತೈತಿ. ಇದೀಗ ಬೆಳಗಾವಿ, ಬಾಗಲಕೋಟೆ, ಬೆಂಗಳೂರ ಹಣ(Money) ಬರ್ತಾವು ಎಂದು ಕಿಡಿಕಾರಿದರು.
ವಿಜಯಪುರ ಕ್ಷೇತ್ರಕ್ಕೆ ಯಾರ್ಯಾರು ಅಣ್ಣಾಗಳು ಬರ್ತಾರ ಬರಲಿ. ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕ ಎರಡುವರೆ, ಮೂರು ಕೋಟಿ ರೂ. ಕಳಿಸಿದ್ದರು ಎಂದು ಬಾಂಬ್ ಸಿಡಿಸಿದರು.