ವಿಜಯಪುರ: ನೀವು ಹಿರಿಯರನ್ನು ಅವರ ಮುಪ್ಪಿನ ಕಾಲದಲ್ಲಿ ಸರಿಯಾಗಿ ನೋಡಿಕೊಳ್ಳದಿದ್ದರೆ ಅವರ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕೂ ಇಲ್ಲ ಎಂದು ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಖಡಕ್ಕಾಗಿ ಎಚ್ಚರಿಸಿದರು.
ಸಮೀಪದ ಅರಕೇರಿಯಲ್ಲಿ ಆರಂಭಗೊಂಡ ಸ್ವಾಭಿಮಾನ ವ್ರದ್ಧಾಶ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಾಲಕರನ್ನು ಮಕ್ಕಳು ಪ್ರೀತಿಯಿಂದ ನೋಡಿಕೊಳ್ಳಬೇಕು. ಅವರಿಗೆ ನೀವು ನಿಮ್ಮ ನೌಕರಿಯ ಒತ್ತಡದಲ್ಲಿ ನೋಡಲಾಗದಿದ್ದರೆ ಇಂತಹ ಓಲ್ಡೇಜ್ ಹೋಮ್ಗಳಲ್ಲಿ ವ್ಯವಸ್ಥೆ ಮಾಡಿಯಾದರೂ ಇಡಬೇಕು ಎಂದು ಕಾಳಜಿ ವ್ಯಕ್ತಪಡಿಸಿದರು.
ಹಿಂದೆ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ಪ್ರಶಾಂತ ಆಶ್ರಮ ಎಂದು ಮಾಡಿ, ನಿಮ್ಮ ತಂದೆ-ತಾಯಿಯನ್ನು ಇಲ್ಲಿ ಬಿಟ್ಟರೆ ಅವರನ್ನು ಸರಿಯಾಗಿ ನೋಡಿಕೊಳ್ಳಲಾಗುವುದು ಮತ್ತು ಅವರ ಆಸ್ತಿಯನ್ನು ಸಿದ್ಧೇಶ್ವರ ಸಂಸ್ಥೆಗೆ ಕೊಡಬೇಕಾಗುತ್ತದೆ ಎಂದು ಹೇಳಿದ್ದೆವು. ಹಾಗಂದದ್ದೇ ತಡ ಆಸ್ತಿ ತಪ್ಪುವ ಭಯದಿಂದ ಯಾರೂ ತಮ್ಮವರನ್ನು ಬಿಡಲೇ ಇಲ್ಲ. ಹೀಗಾದರೂ ನಮ್ಮ ಉದ್ದೇಶ ಸಾಫಲ್ಯವಾಯಿತು ಎಂದು ಸಭಿಕರನ್ನು ನಗೆಯಲ್ಲಿ ತೇಲಿಸಿದರು.
ಸದ್ಯ ಆಪ್ಟೆ ಕುಟುಂಬ ಸೇವಾ ಮನೋಭಾವದಿಂದ ವೃದ್ಧಾಶ್ರಮ ಮಾಡುತ್ತಿರುವುದು ಒಳ್ಳೆಯದು. ಹಿರಿಯ ಜೀವಿಗಳಿಗೆ ಅವರ ಮುಸ್ಸಂಜೆ ಹೊತ್ತಲ್ಲಿ ನೆಮ್ಮದಿಯ ಬದುಕು ಸಿಗುವಂತಾಗಲಿ ಎಂದು ಹರಸಿದರು. ಶಾಸಕ ಯತ್ನಾಳ್ ಅವರು ಎಂದಿನ ತಮ್ಮ ಶೈಲಿಯನ್ನು ಹೊರತುಪಡಿಸಿ ಆಪ್ತವಾಗಿ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಲೋಕಾಯುಕ್ತ ಅಧಿಕಾರಿ ಮಹೇಂದ್ರಕುಮಾರ ನಾಯಕ್, ಪ್ರತಿಭಾ ಪಾಟೀಲ್ ಉಪಸ್ಥಿತರಿದ್ದರು. ಶಿವಾನಂದ ರೇಶ್ಮೆ, ಸುನಂದಾ ತೋಳಬಂದಿ, ರಾಮ್ಸಿಂಗ ರಜಪೂತ, ಚೇತನ ರಜಪೂತ, ಯೋಧ ಪ್ರವೀಣ್ ಜುಗ್ನು ಪೂಜಾರಿಯವರನ್ನು ಸತ್ಕರಿಸಲಾಯಿತು.
ಸುಧೀರ ಆಪ್ಟೆ, ಲತಾ ಆಪ್ಟೆ, ಉದಯ್, ಸ್ಮಿತಾ, ಕೌಸ್ತುಬ್, ಅರುಣಾ, ರಾಹುಲ್, ಪ್ರಾಜಕ್ತಾ, ಶ್ರೇಯಸ್, ಶ್ರದ್ಧಾ, ರಿದ್ಧಿ, ರೋಹನ್, ಶೀತಲ್ ಹಾಗೂ ಸುಪ್ರಿಯಾ ಕುಲಕರ್ಣಿ ಕಿರಣ ಕೊಳುರಗಿ , ಪ್ರೇಮ ಕಲಕುಟಗಿ , ಆದಿತ್ಯ ಬಡಿಗೇರ , ವಿಕ್ರಮ ತಾಂಬೇಕರ, ಶ್ರೀಪಾದ ಸಾಳುಂಕೆ, ಪ್ರದೀಪ ಮುಂಜಿ ಪ್ರೀತಿ ಪಾಟೀಲ ಇದ್ದರು