ವಿಜಯಪುರ: ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಪೊಲೀಸ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸುವ ಘಟನೆ ವಿಜಯಪುರದ ರಹೀಂನಗರದಲ್ಲಿ ಗುರುವಾರ ನಡೆದಿದೆ.
ಬಿಲಾಲ್ ಬೀಳಗಿ ಎಂಬುವರ ಮನೆಯಲ್ಲಿ ಕಳ್ಳತನ ಆಗಿದೆ. ಇನ್ನು ಮನೆಯಲ್ಲಿದ್ದ 11 ಸಾವಿರ ನಗದು, 7 ತೊಲಿ ಚಿನ್ನ, 25 ತೊಲಿ ಬೆಳ್ಳಿಯನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.