ಹುಬ್ಬಳ್ಳಿ: ಸಹೋದ್ಯೋಗಿ ಮುತ್ತಪ್ಪ ಹಡಗಲಿ ಅವರ ಕೈಯಿಂದ ಗಂಭೀರ ಗಾಯಗೊಂಡಿದ್ದ ಶಿಕ್ಷಕಿ ಗೀತಾ ಬಾರ್ಕರ್ (34) ಗುರುವಾರ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ಸಮೀಪದ ಹಡ್ಲಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಮುತ್ತಪ್ಪ ಹಡಗಲಿ ಎಂಬಾತ ಗೀತಾಳ ಒಂಬತ್ತು ವರ್ಷದ ಮಗ ಭರತ್ನನ್ನು ಹೊಡೆದು ಕೊಂದಿದ್ದ.
ಈ ಮನಕಲಕುವ ಘಟನೆ ಸೋಮವಾರ ನಡೆದಿದ್ದು, ಅದೇ ದಿನ ಭರತ್ ಬಾರಕರ್ ಅವರು ಸಾವನ್ನಪ್ಪಿದ್ದಾರೆ. ಆತನ ತಾಯಿ ಅದೇ ಶಾಲೆಯ ಶಿಕ್ಷಕಿ ಗೀತಾ ಬಾರಕೇರಿ ಅವರ ಮೇಲೂ ಹಲ್ಲೆ ನಡೆದಿತ್ತು. ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ.