ವಿಜಯಪುರ: ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಹಾಜರಾದ ತಾಳಿಕೋಟಿ ತಾಲೂಕಾ ಪಂಚಾಯತಿಯ ಪ್ರಭಾರ ಸಹಾಯಕ ನಿರ್ದೇಶಕ ಹಾಗೂ ಬಾವೂರ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹುಸೇನಬಾಷಾ ನಾಯ್ಕೋಡಿ ಅವರನ್ನು ಇಲಾಖಾ ವಿಚಾರಣೆಗೊಳಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಆದೇಶಿಸಿದ್ದಾರೆ.