ವಿಜಯಪುರ: ವಿಜಯಪುರ ಕೇಂದ್ರ ಕಾರಾಗೃಹ ಹಾಗೂ ಕಣಬೂರ ಕಣ್ಣಿನ ಆಸ್ಪತ್ರೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಕಾರಾಗೃಹದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಉಚಿತ ನೇತ್ರ ತಪಾಸಣಾ ಶಿಬಿರವನ್ನು ಡಾ.ಆನಂದ ಕಣಬೂರ ಅವರು ಉದ್ಘಾಟಿಸಿ, ಮಾತನಾಡಿದ ಅವರು, ನಮ್ಮ ಶರೀರದಲ್ಲಿರುವ ಅಂಗಗಳಲ್ಲಿ ಅತೀ ಸೂಕ್ಷ್ಮ ಅಂಗ ಕಣ್ಣು, ನಮ್ಮ ದೇಹದ ಕೆಲವು ಅಂಗಗಳಲ್ಲಿ ಅಂಗ ವೈಕಲ್ಯವಾದರೆ ಸರಳವಾಗಿ ಬದುಕಬಹುದು. ಕಣ್ಣಿನ ದೃಷ್ಟಿ ಕಳೆದುಕೊಂಡರೆ ಬದುಕು ನರಕವಾದಂತಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ನಿರಂಜನ್ ಇಟ್ಟಣ್ಣವರ ಮಾತನಾಡಿ ಬಹಳ ಜನ ಬಂದಿಗಳಿಗೆ ದೃಷ್ಟಿ ಚಿಕಿತ್ಸೆ ಮತ್ತು ತಪಾಸಣೆ ಅಗತ್ಯತೆ ಇದೆ. ಈ ಶಿಬಿರವು ವಯಸ್ಸಾದ ಬಂದಿಗಳಿಗೆ ಅನುಕೂಲ. ಇಂಥ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಮಂಜುನಾಥ ಹೆಚ್.ಜಿ.ಮಾತನಾಡಿ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದುದು.ಯಥಾ ದೃಷ್ಠಿ ತಥಾ ಸೃಷಿ.ದೃಷ್ಠಿ ಕಳೆದು ಕೊಂಡರೆ ಜೀವನ ಅಂಧಕಾರ, ಸುಂದರ ಸೃಷ್ಟಿಯನ್ನು ನೋಡುವ ಅವಕಾಶ ವಂಚಿತರಾಗಬೇಡಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಅಧೀಕ್ಷಕ ಡಾ.ಐ.ಜೆ.ಮ್ಯಾಗೇರಿ ಮಾತನಾಡಿ,ಮಾನವನ ಹಸಿವು, ನೀರಡಿಕೆ,ಬಟ್ಟೆಯ ಅಗತ್ಯ ನೀಗಿಸಬಹುದು ಆದರೆ,ದೃಷ್ಟಿಯ ನೀಡುವುದು ಭಾಗ್ಯದ ಕೆಲಸ ಅದು ಸುಲಭವಾದುದಲ್ಲ ಈ ಸಮಯ ವ್ಯರ್ಥ ಮಾಡದೇ ಸದುಪಯೋಗ ಮಾಡಿಕೊಳ್ಳಿ ನಿಮ್ಮ ಕಣ್ಣುಗಳ ರಕ್ಷಣೆಮಾಡಿಕೊಳ್ಳಿ ಜಗತ್ತು ನೋಡುವ ಪ್ರಮುಖ ಅಂಗದ ಕಾಳಜಿ ವಹಿಸುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರಾಗೃಹದ ವೈದ್ಯಾಧಿಕಾರಿ ಡಾ.ಆರ್.ಸಿ. ವಾಘ್ಮೋರೆ,ಕಚೇರಿ ಅಧೀಕ್ಷಕ ಧಾವಜಿ ರಾಠೋಡ, ಜೈಲರ್ ಜಿ.ಕೆ.ಕುಲಕರ್ಣಿ, ಶಿಕ್ಷಕ ಶ್ರೀಮತಿ ಎಸ್.ಬಿ. ಕುಲಕರ್ಣಿ ಹಾಗೂ ಡಿ.ಎಸ್.ದಿಕ್ಷೀತ್ ಸೇರಿದಂತೆ ಇತರೆ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರೀಮತಿ ಕವಿತಾ ತಂಗಡಿ ಸ್ವಾಗತಿಸಿದರು. ಶ್ರೀಮತಿ ಶಕೀನಾಬೇಗಂ ನದಾಫ್ ನಿರೂಪಿಸಿ, ವಂದಿಸಿದರು.