ಅಲಿಗಢ: ಬ್ಯೂಟಿ ಪಾರ್ಲರ್ಗೆ ಹಣ ನೀಡದ ಗಂಡನಿಗೆ ವಿಚ್ಛೇದನಕ್ಕೆ(Divorce) ಹೆಂಡ್ತಿ ಅರ್ಜಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹೌದು..! 25 ವರ್ಷದ ದೆಹಲಿ ನಿವಾಸಿ ಅಮಿತ್ ಅವರನ್ನು ಮಹಿಳೆ 2015 ರಲ್ಲಿ ಮದುವೆ ಆಗಿದ್ದರು. ಕಳೆದ ವರ್ಷ ಹಿಂದೆ ಇಬ್ಬರ ನಡುವೆ ಕೋಪ, ಜಗಳ ಆಗುತ್ತಿತ್ತು. ಇನ್ನೂ ಬ್ಯೂಟಿಪಾರ್ಲರ್ಗೆ ಹೋಗಲು ಹಣ ಕೊಡುತ್ತಿಲ್ಲೆಂದು ಕಾರಣಕ್ಕೆ ಪತ್ನಿ ವಿಚ್ಛೇದನ ಕೇಳಿದ ಅಚ್ಚರಿಯ ಘಟನೆ ಕೂಡು ನಡೆದಿದೆ. ಅಲಿಗಢದ ಸಿವಿಲ್ ಲೈನ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಇದೀಗ ಖರ್ಚಿಗಾಗಿ ಪತ್ನಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಪತಿ ಮೇಕಪ್ ಮತ್ತು ಇತರ ಮನೆಯ ಖರ್ಚಿಗೆ ಹಣ ನೀಡುವುದಿಲ್ಲ ಎಂದು ಪತ್ನಿ ಆರೋಪಿಸಿದ್ದಾರೆ. ಈಗ ಇಬ್ಬರ ಕೌನ್ಸೆಲಿಂಗ್ ಜನವರಿ ತಿಂಗಳಲ್ಲಿ ನಡೆಯಲಿದೆ ಎಂದು ಮಾಹಿತಿ ತಿಳಿದುಬಂದಿದೆ.