ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿರುವ ಕೊಲ್ಹಾರ ಸೇತುವೆ ಮೇಲೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಲಾರಿ ಮಧ್ಯೆ ಡಿಕ್ಕಿಯಾಗಿರುವ ಪರಿಣಾಮ ಎರಡು ವಾಹನಗಳು ಜಖಂಗೊಂಡಿರುವ ಘಟನೆ ರವಿವಾರ ಬೆಳೆಗ್ಗೆ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಆದ್ರೇ, ಕಬ್ಬಿನ ಟ್ರ್ಯಾಕ್ಟರ್ ಸಂಪೂರ್ಣವಾಗಿ ಜಖಂಗೊಂಡಿದೆ. ಅಲ್ಲದೇ, ಟ್ರ್ಯಾಕ್ಟರ್ನಲ್ಲಿದ್ದ ಕಬ್ಬು ನೆಲಕ್ಕೆ ನಿದ್ದು ನಷ್ಟವಾಗಿದೆ. ಅಪಘಾತದ ಬಳಿಕ
ಸಾಲುಗಟ್ಟಿ ನಿಂತ ನೂರಾರು ವಾಹನಗಳನ್ನು ಪೊಲೀಸರು ಕ್ಲಿಯರ್ ಮಾಡಿದರು. ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.