ವಿಜಯಪುರ: ಲಾರಿಯ ಟೈಯರ್ ಬ್ಲಾಸ್ಟ್ ಆಗಿರುವ ಪರಿಣಾಮ ಟೋಲ್ಗೇಟ್ಗೆ ಲಾರಿ ಡಿಕ್ಕಿಯಾಗಿ ಬೆಂಕಿಗಾಹುತಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಬಳಿ ನಡೆದಿದೆ.
ಮೆಹಬೂಬ್ಸಾಬ್ ಎಂಬುವರ ಕೆಎ 50 ಎ 7011 ಲಾರಿ ಬೆಂಕಿಗಾಹುತಿ ಆಗಿದೆ. ವೇಗವಾಗಿ ಚಲಿಸುತ್ತಿದ್ದ ವೇಳೆ ಲಾರಿ ಟೈಯರ್ ಬ್ಲಾಸ್ಟ್ ಆಗಿದೆ. ಈ ವೇಳೆ ಟೋಲ್ಗೇಟ್ಗೆ ಲಾರಿ ಡಿಕ್ಕಿಯಾಗಿ ಬೆಂಕಿ ಆವರಿಸಿ ಭಸ್ಮವಾಗಿದೆ. ಸಿಂದಗಿ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಿದರು. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.