ವಿಜಯಪುರ: ಪೊಲೀಸರು ಎಂದ್ರೆ ಜನರಲ್ಲಿ ಭಯ.. ಆತಂಕ.. ಆದ್ರೇ, ಇಲ್ಲೊಬ್ಬರು ಪೊಲೀಸ ಕಾರ್ಯಕ್ಕೆ ಬಸವನಾಡಿನ ಜನತೆ ಶಹಬಾಷ್ ಗಿರಿ ನೀಡಿದ್ದಾರೆ.
ಹೌದು..! ತಮ್ಮ ಜನ್ಮ ದಿನದ ಅಂಗವಾಗಿ ಅಂಗವಿಕಲನಿಗೆ ತ್ರಿಚಕ್ರ ಸೈಕಲ್ ಉಚಿತವಾಗಿ ನೀಡಿ ತಮ್ಮ ಜನ್ಮ ದಿನವನ್ನು ವಿಭಿನ್ನವಾಗಿ ಪೊಲೀಸ ಆಚರಿಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಪೊಲೀಸ ಠಾಣೆಯ ಶಂಕರಗೌಡ ನಾವದಗಿ ಅವರು ಅಂಗವಿಕಲನಿಗೆ ತ್ರಿಚಕ್ರ ಸೈಕಲ್ ನೀಡಿದ್ದಾರೆ. ಇದರಿಂದ ಅಂಗವಿಕಲನ ಮುಖದಲ್ಲಿ ಉತ್ಸಾಹ ಮೂಡಿದೆ. ಸ್ಥಳೀಯ ಜನತೆ ದಿಲ್ ಖುಷ್ ಆಗಿದ್ದಾರೆ.