ವಿಜಯಪುರ: ವಿಜಯಪುರದಲ್ಲಿ ಕಾಂಗ್ರೆಸ್ನಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ವಿಜಯಪುರದಲ್ಲಿ ಕಾಂಗ್ರೆಸ್ನಿಂದ ಡಿಸೆಂಬರ್ 30ಕ್ಕೆ ಬೃಹತ್ ಸಮಾವೇಶ ನಡೆಯಲಿದೆ. ಅದಕ್ಕಾಗಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಅದಕ್ಕಾಗಿ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಸೇರಿದಂತೆ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಸಮಾವೇಶ ಮಾಡಲಾಗುತ್ತದೆ ಎಂದರು.
ಸಮಾವೇಶಕ್ಕೆ ಕೇಂದ್ರ ನಾಯಕರು ಬರಲ್ಲ..
ವಿಜಯಪುರದಲ್ಲಿ ಡಿ.30ಕ್ಕೆ ಸಮಾವೇಶ ನಡೆಯಲಿದೆ. ಆದ್ರೇ, ಸಮಾವೇಶದಲ್ಲಿ ಕೇಂದ್ರದ ನಾಯಕರು ಬರಲ್ಲ. ರಾಜ್ಯದ ನಾಯಕರು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ನ ಘಟಾನುಘಟಿ ನಾಯಕರು ಬರುತ್ತಾರೆ ಎಂದರು.
ಸ್ಥಳ ನಿಗದಿ ಆಗಿಲ್ಲ…
ಕೈ ಸಮಾವೇಶ ವಿಜಯಪುರದಲ್ಲಿ ನಡೆಯಲಿದೆ. ಈಗಾಗಲೇ ಯಾವ ಸ್ಥಳದಲ್ಲಿ ಸಮಾವೇಶ ಮಾಡಬೇಕು ಎನ್ನುವುದ ತೀರ್ಮಾನ ಆಗಿಲ್ಲ. ಅದಕ್ಕಾಗಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಆಗುತ್ತದೆ ಎಂದರು.