ವಿಜಯಪುರ: ನಗರದ ಸೋಲಾಪುರ ರಸ್ತೆಯಲ್ಲಿ ಜೆಸಿಬಿಗಳು ಘರ್ಜನೆ ನಡೆಸಿದ್ದು, ಸೋಲಾಪುರ ರಸ್ತೆಯ ಉಮದಿ ಸೂಪರ್ ಮಾರ್ಕೆಟ್ ನಿಂದ ಬಂಜಾರ ಕ್ರಾಸ್ ವರೆಗೂ ಮೊದಲ ಹಂತದ ಮಾಸ್ಟರ್ ಪ್ಲಾನ್ ಕಾರ್ಯಾಚರಣೆ ಸೋಮವಾರ ನಡೆಯಿತು.
ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಸುಮಾರು 8 ಜೆಸಿಬಿಗಳು ತೆರವು ಕಾರ್ಯಾಚರಣೆಯಲ್ಲಿ ನಿರತವಾಗಿದ್ದು, ಮಾಜಿ ಎಂ.ಎಲ್.ಎ. ಉಸ್ತಾದ್ ಅವರ ಮನೆ ಕಂಪೌಂಡ್ ಸೇರಿದಂತೆ ಪ್ರತಿಷ್ಠಿತ ಹೋಟೆಲ್ ಗಳು ನೆಲಸಮವಾಗಿವೆ. ರಸ್ತೆ ಅಗಲೀಕರಣ, ಚರಂಡಿ ವ್ಯವಸ್ಥೆ, ಪುಟ್ ಪಾತ್ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಹಿನ್ನೆಲೆ ಅತಿಕ್ರಮಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲಾಯಿತು.