ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ತೋಲಗಿ ಗ್ರಾಮದಲ್ಲಿ ಗಂಟು ರೋಗಕ್ಕೆ ಜಾನುವಾರವೊಂದು ಬಲಿಯಾಗಿದೆ. ತೋಲಗಿ ಗ್ರಾಮದ ಶಂಕರ್ ದೊಡ್ಡಪ್ಪನವರ ಎಂಬುವರ 70 ಸಾವಿರ ಮೌಲ್ಯದ ಆಕಳು ಸಾವನ್ನಪ್ಪಿದೆ. ತಾಲೂಕಿನಲ್ಲಿ ಇತ್ತೀಚಿಗೆ ಗಂಟು ರೋಗದ ಬಾದೆ ತೀವ್ರವಾಗಿದ್ದು, ಸರಿಯಾದ ಚಿಕಿತ್ಸೆ ಸಿಗದೆ ಜಾನುವಾರುಗಳು ಮರಣ ಹೊಂದುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ, ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸ್ಥಳೀಯರು ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಆಗ್ರಹಿಸಿದ್ದಾರೆ.