ಹಾವೇರಿ: ಏಲಕ್ಕಿ ನಾಡಿನಲ್ಲಿ ಅಚ್ಚರಿಯ ಕರುವೊಂದು ಜನಿಸಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಹಿರೆಕೆರೂರ ತಾಲುಕಿನ ಮಡ್ಲುರ ಗ್ರಾಮದಲ್ಲಿ ವಿಚಿತ್ರ ಕರು ಜನಿಸಿದೆ. ಶಾಂತಪ್ಪ ಎಂಬುವರ ಆಕಳು ಎರಡು ತಲೆಯ ಗಂಡು ಕರುವಿಗೆ ಜನ್ಮ ನೀಡಿದೆ. ದುರದೃಷ್ಟವಶಾತ್ ಕರು ಜನಿಸಿದ ತಕ್ಷಣವೆ ಅಸುನೀಗಿದೆ. ಎರಡು ತಲೆಯ ಕರುವನ್ನು ನೋಡಲು ಮನೆಗೆ ಗ್ರಾಮಸ್ಥರು ಬರುತ್ತಿದ್ದಾರೆ. ಆದರೆ ಕರು ಜೀವಂತವಿಲ್ಲದಕ್ಕೆ ಕಂಡು ಜನತೆ ಮರುಗುತ್ತಿದ್ದಾರೆ.