ವಿಜಯಪುರ: ವೃದ್ಧೆಯ ಮನೆಯಲ್ಲಿ ಕಳ್ಳನೋರ್ವ ಕಳ್ಳತನಗೈದು ಎಸ್ಕೇಪ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ
ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ಇಂಗಳಗಿ ಗ್ರಾಮದ ಮಲ್ಲಮ್ಮ ಎಂಬ 65 ವರ್ಷದ ಮನೆಯಲ್ಲಿದ್ದ 1.5 ತೊಲಿ ಚಿನ್ನಾಭರಣ ಹಾಗೂ 30 ಸಾವಿರ ನಗದು ದೋಚಿ ಪರಾರಿಯಾಗಿದ್ದಾನೆ. ಮನೆಯೊಳಗೇ ನುಗ್ಗಿದ ಕಳ್ಳ ವೃದ್ಧೆಗೆ ಬಟ್ಟೆಯಿಂದ ಬಾಯಿಗೆ ಕಟ್ಟಿ ಅಲೆಮಾರಿನಲ್ಲಿನ ಹಣ ಚಿನ್ನ ದೋಚಿದ್ದಾರೆ. ಎದುರು ಮನೆಯಲ್ಲಿದ್ದ ವ್ಯಕ್ತಿ ಕಳ್ಳತನ ಮಾಡಿದ್ದಾನೆ ಎಂದು ವೃದ್ಧೆಯ ಆರೋಪ ಆಗಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.