ಬೆಂಗಳೂರು: ಕೋವಿಡ್ 4ನೆ ಅಲೆ ಬರುತ್ತದೆ, ಹೋಗುತ್ತದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾಧ್ಯಮದ ಎದುರು ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಲೆ ಹತ್ತಿ ಉರಿದ್ರೆ ಅಡುಗೆ ಆಗುತ್ತದೆ. ಭೂಮಿ ಹತ್ತಿ ಉರಿದರೆ ಏನಾಗುತ್ತದೆ ಎಂದು ಮುಂದೆ ಅದರ ಬಗ್ಗೆ ಭವಿಷ್ಯ ಹೇಳ್ತೇನೆ ಎಂದರು. ಕೋವಿಡ್ನಿಂದ ಏನು ಸಮಸ್ಯೆ ಆಗಲ್ಲ. ಜನರು ಆತಂಕ ಪಡುವ ಅವಶ್ಯಕತೆ ಇಲ್ಲ, ಕೋವಿಡ್ ಬಂದು ಹೋಗುತ್ತದೆ. ಯಾರು ಭಯ ಪಡುವ ಅಗತ್ಯ ಇಲ್ಲ ಎಂದರು.