ವಿಜಯಪುರ: ಜ್ಞಾನಯೋಗ್ರಾಮದ ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಮತ್ತೆ ವದಂತಿ ಹಿನ್ನೆಲೆ ಜ್ಞಾನಯೋಗ್ರಾಮದಿಂದ ಪ್ರಕಟಣೆ ನೀಡಿದ್ದಾರೆ. ಶ್ರೀಗಳು ಆರೋಗ್ಯವಾಗಿದ್ದಾರೆ ಎಂದು ಪ್ರಕಟಣೆ ಮೂಲಕ ಜ್ಞಾನಯೋಗಾಶ್ರಮ ಮಾಹಿತಿ ತಿಳಿಸಿದ್ದಾರೆ. ಸಿದ್ದೇಶ್ವರ ಶ್ರೀಗಳ ಆರೋಗ್ಯ ಚೆನ್ನಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಆಶ್ರಮದಲ್ಲಿ ಸಾರ್ವಜನಿಕರಿಗೆ ಭೇಟಿಯಾಗಲಿದ್ದಾರೆ. ದರ್ಶನ ಪಡೆದುಕೊಳ್ಳಿ ಎಂದು ಪ್ರಕಟಣೆಯಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷರು ಬಸವಲಿಂಗ ಶ್ರೀಗಳಿಂದ ಪ್ರಕಟಣೆ ತಿಳಿಸಿದ್ದಾರೆ.