ವಿಜಯಪುರ ::
ಶಕ್ತಿಯೋಜನೆ ಅಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಮಾನ್ಯ ಜಿಲ್ಲಾಧಿಕಾರಿಗಳು ನೀಡಿರುವ ID ಕಾರ್ಡ್ ತೋರಿಸಿದರು ಕಂಡಕ್ಟರ್ ಗಳಿಂದ ಸಾರ್ವಜನಿಕ ನಿಂದನೆ, ಹಿಂಸೆ ನಿರಂತರವಾಗಿ ನಡೆಯುತ್ತಿದ್ದು ಆದರಿಂದ ಶಕ್ತಿ ಯೋಜನೆಯನ್ನು ವಿಜಯಪುರ ಜಿಲ್ಲೆಯಲ್ಲಿ ರದ್ದುಗೊಳಿಸಿ ಎಂದು ನವಸ್ಪೂರ್ತಿ ಸಂಘದ ಜಿಲ್ಲಾದ್ಯಕ್ಷರಾದ ಶಬ್ಬೀರ ಕಾಗಜಕೊಟ ಅವರು ವಿನಂತಿಸಿದರು..ಇಂದು ವಿಜಯಪುರ ನಗರದ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ತ್ರತೀಯ ಲಿಂಗಿಗಳು ವಿಜಯಪುರ ಜಿಲ್ಲೆಯಲ್ಲಿ ನಿರಂತರ ವಾಗಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ನಮ್ಮ ಜಿಲ್ಲೆಯಲ್ಲಿ ಅನುಷ್ಠಾನ ಮಾಡುವಲ್ಲಿ ಸಾರಿಗೆ ಇಲಾಖೆಯ ಜಿಲ್ಲಾ ನಿಯಂತ್ರಣಾಧಿಕಾರಿಗಳು ಸಂಪೂರ್ಣವಾಗಿ ವಿಪಲವಾಗಿದ್ದಾರೆ ಆದರಿಂದ ಈ ಯೋಜನೆಯನ್ನು ನಮಗೆ ನಮ್ಮ ಜಿಲ್ಲೆಯಲ್ಲಿ ಸಂಪೂರ್ಣವಾಗಿ ರದ್ದುಪಡಿಸಲು ಆಗ್ರಹಪಡಿಸಿದರು.. ಈ ಸಂದರ್ಭದಲ್ಲಿ ಮಾತನಾಡಿದ ತ್ರತೀಯ ಲಿಂಗಿಯಾದ ಮಲ್ಲು ಕುಂಬಾರ ಮಾತನಾಡಿ ಶಕ್ತಿ ಯೋಜನೆ ಅಡಿಯಲ್ಲಿ ನಾವು ಪ್ರಯಾಣಿಸುವಾಗ ಯಾವುದೇ ಹಿಂಸೆ ಸಾರ್ವಜನಿಕ ನಿಂದನೆಯಾಗದಂತೆ ಅನುಷ್ಟಾನ ಆಗಬೇಕು ಮತ್ತು ನಿಂದಿಸಿದವರನ್ನು ಅಮಾನತ್ತು ಮಾಡಬೇಕು ಅಲ್ಲದೇ ಲಿಂಗತ್ವ ಅಲ್ಪಸಂಖ್ಯಾತರಿಗೆ ಗೌರವಯುತ ಸಮಾನತೆ ಬದುಕನ್ನು ನಡೆಸಲು ವಾತಾವರಣ ನಿರ್ಮಾಣ ಆಗಬೇಕು ಎಂದು ಆಗ್ರಹ ಪಡಿಸಿದರು..