ಬೆಳಗಾವಿ: ಎಎಸ್ಐ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ಬೀರೇಶ್ವರ ದೇವಸ್ಥಾನದ ಪಕ್ಕದ ಶೆಡ್ನಲ್ಲಿ ನಡೆದಿದೆ. ಅಥಣಿ ಠಾಣೆಯ ಎಎಸ್ಐ ರಾಮಲಿಂಗ್ ನಾಯಕ್ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಳಗವಾಡಿ ಗ್ರಾಮದ ಬೀರೇಶ್ವರ ದೇವಸ್ಥಾನದ ಪಕ್ಕದ ಶೆಡ್ನಲ್ಲಿ ನೇಣು ಬಿಗಿದುಕೊಂಡು ಅಸುನೀಗಿದ್ದಾರೆ. ಎಎಸ್ಐ ರಾಮಲಿಂಗ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಹಾರೊಗೇರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು. ಹಾರೊಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಸಂಭವಿಸಿದೆ.