ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟಿಲ್ ಒಬ್ಬ ವಿದೂಷಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಕೆಂಪಣ್ಣ ಜೊತೆಗೆ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗ್ತಾರೆ ಎಂದಿದ್ದ ಕಟೀಲ್ ವಿರುದ್ಧ ಟಗರು ಡಿಚ್ಚಿ ನೀಡಿದರು. ವಿದೂಷಕನ ಮಾತಿಗೆ ಉತ್ತರ ಕೊಡಲ್ಲ. ಕೆಂಪಣ್ಣ ಯಾರು ಎಂದು ಮಾಧ್ಯಮಗಳು ಪ್ರಶ್ನೆ ಕೇಳಿದಾಗ ಕೆಂಪಣ್ಣ ಯಾರು? ಎಂದರು. ಅಲ್ಲದೇ, ಮೀಸಲಾತಿ 3ಎ, 3ಬಿ ನವರಿಗೆ ಕಣ್ಣೊರೆಸುವ ತಂತ್ರವಾಗಿದೆ. ಸಂವಿಧಾನದಲ್ಲಿ ಇದಕ್ಕೆ ಮಾನ್ಯತೆ ಇಲ್ಲ. 2ಸಿ, 2ಡಿ ಬಗ್ಗೆ ಮಾತನಾಡೊಕೆ ನಾನು ಅಧ್ಯಯನ ಮಾಡಬೇಕು. 3A, 3B ಎಲ್ಲ ಜಾತಿಗಳು 2ಸಿ, 2ಡಿ ಗೆ ಬರ್ತಾವಾ. 2ಸಿ, 2ಡಿ ಅವರಿಗೆ ಇವರು ಏನೆಲ್ಲ ಕೊಡ್ತಾರೆ ಗೊತ್ತಾಗಬೇಕಲ್ಲ ಎಂದರು.