ಧಾರವಾಡ: ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ, ನೇತಾಜಿ ಸುಭಾಷ್ ಚಂದ್ರ ಬೋಸರ 125ನೇ ಜನ್ಮ ವಾರ್ಷಿಕದ ಹಿನ್ನೆಲೆಯಲ್ಲಿ ಇಂದು ಧಾರವಾಡದ ಕಿಟಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕಲಾ ಮಹಾವಿದ್ಯಾಲಯದ ಉರ್ದು ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾಕ್ಟರ್ ಎಸ್ ಎ ಕೋಳೂರು, ನಿರಂತರವಾಗಿ ವಿದ್ಯಾರ್ಥಿಗಳ ಹಲವಾರು ಶೈಕ್ಷಣಿಕ ಸಂಸ್ಥೆಗಳ ಕುರಿತು ಹೋರಾಟಗಳನ್ನು ಸಂಘಟಿಸುತ್ತಿರುವ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಇಂದು ನೇತಾಜಿಯವರ ಜನ್ಮವಾರ್ಷಿಕದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಗಾಯನ ಚರ್ಚೆ ಪ್ರಬಂಧ ಚಿತ್ರಕಲೆ ಸೇರದಂತೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಿರುವುದು ಅಭಿನಂದನಾರ್ಹವಾದ ಕೆಲಸ. ಈ ಮೂಲಕ ನೇತಾಜಿಯವರ ಚಿಂತನೆಗಳನ್ನು ವಿದ್ಯಾರ್ಥಿಗಳ ಮಧ್ಯ ಹರಡುತ್ತಿರುವ ಸಂಘಟನೆಯ ಕೆಲಸ ಶ್ಲಾಘನೀಯವಾದದ್ದು ಎಂದು ಹೇಳಿದರು. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭಾಶಯ ಕೋರುತ್ತಾ ಸೋಲು ಅಥವಾ ಗೆಲುವಿಗಿಂತ ನಿಮ್ಮ ಭಾಗವಹಿಸುವಿಕೆ ಮುಖ್ಯವಾದುದು. ಸ್ಪರ್ಧೆಯಲ್ಲಿ ಸ್ಥಾನ ಗಳಿಸಿದ್ದವರು ಕುಗ್ಗಬಾರದು ಮತ್ತು ಮೊದಲನೇ ಸ್ಥಾನ ಪಡೆದವರು ನಾನೇ ಅತ್ಯಂತ ನಿಪುಣ ಎಂದು ಬೀಗಬಾರದು ಎಂದು ಕಿವಿ ಮಾತು ಹೇಳಿದರು. ಹಾಗೂ ನೇತಾಜಿ ಅವರು ಹೇಳಿದಂತೆ ಅನ್ಯಾಯದ ವಿರುದ್ಧ ನಾವು ದುನಿಯಾ ಬೇಕು ಮತ್ತು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರ ಮುಖಾಂತರ ಯಶಸ್ಸನ್ನು ಸಾಧಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡದ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ನೂರಾರು ಜನ ವಿದ್ಯಾರ್ಥಿಗಳು ರಸಪ್ರಶ್ನೆ, ಪ್ರಬಂಧ, ದೇಶಭಕ್ತಿ ಗೀತೆ, ಚಿತ್ರಕಲೆ ಸೇರಿದಂತೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ಸ್ವಾತಂತ್ರ್ಯ ಸೇನಾನಿ ನೇತಾಜಿಯವರಿಗೆ ತಮ್ಮ ನಮನ ಅರ್ಪಿಸಿದರು. ಸ್ಪರ್ಧೆಗಳ ತೀರ್ಪುಗಳ ಘೋಷಣೆ ಹಾಗೂ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು 21 ಜನವರಿ 2023 ರಂದು ನಡೆಯುವ ನೇತಾಜಿಯವರ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿವರಿಸಲಾಗುವುದು ತೀರ್ಪುಗಾರರಾಗಿ ಯುಪಿಎಸ್ ಶಾಲೆಯ ಶಿಲ್ಪಾ, ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ ಶ್ರೀಮತಿ ಜಯಂತಿ ದೊಡ್ಡಮನಿ ಬಾಲ ಬಳಗ ಶಾಲೆಯ ಸಹನಾ ನಾಡಗೌಡರ್ ಸೇರಿದಂತೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಹಾಂತೇಶ್ ಬೀಳೂರ್ ಶಶಿಕಲಾ ಮೇಟಿ ಹಾಗೂ ಸಿಂಧೂ ಕೌದಿ ಮತ್ತು ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.