ವಿಜಯಪುರ: ವಿಜಯಪುರ ನೀರು ಸರಬರಾಜು ಸ್ಥಾವರಕ್ಕೆ 110/11ಕೆವ್ಹಿ ಮಟ್ಟಿಹಾಳ ವಿದ್ಯುತ್ ಉಪ ಕೇಂದ್ರದಿಂದ ಸರಬರಾಜಾಗುತ್ತಿರುವ 33ಕೆವ್ಹಿ ಕೊಲ್ಹಾರ ವಿದ್ಯುತ್ ಮಾರ್ಗ ಹಾಗೂ ಕಾರಜೋಳ ಎಲ್ಐಎಸ್ ಮಾರ್ಗಗಳ ಮೇಲೆ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳುವುದರಿಂದ ಜ.10ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ 110 ಕೆವ್ಹಿ ಮಟ್ಟಿಹಾಳ ವಿದ್ಯುತ್ ಉಪ ಕೇಂದ್ರದಿಂದ ಸರಬರಾಜಾಗುವ 33 ಕೆವ್ಹಿ ಕೊಲ್ಹಾರ ಮತ್ತು ಕಾರಜೋಳ ಎಲ್ಐಎಸ್ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.