ಬೆಳಗಾವಿ: ಜಿಲ್ಲೆಯ ಖಾನಾಪುರ ಪಟ್ಟಣದ ಬಿಜೆಪಿಯ ದೂರು ನಿವಾರಣಾ ಕಚೇರಿಯಲ್ಲಿ ‘ಡಾ ಸುನಾಲಿ ಸರ್ನೋಬತ್ ‘ಹರ್ ಘರ್ ಭಗವಾ ಹರ್ ಘರ್ ಶಿವಬಸವ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಸ್ವಾಮೀಜಿಗಳು ಮತ್ತು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸಂಜಯ ಪಾಟೀಲ ದೀಪ ಬೆಳಗಿಸಿ ಬಸವೇಶ್ವರ ಶಿವಾಜಿ ಮಹಾರಾಜರ ಭಾವಚಿತ್ರ ಮತ್ತು ಭಗವ ಧ್ವಜ ವಿತರಣೆ ಮಾಡುವ ಮುಖಾಂತರ ಅಭಿಯಾನಕ್ಕೆ ಚಾಲನೆ ನೀಡಿದರು. ಡಾ.ಸೋನಾಲಿ ಸರ್ನೋಬತ್ ಯುವಕರಲ್ಲಿ ನಮ್ಮ ಹಿಂದೂ ಸಂಸ್ಕೃತಿಯನ್ನು ಹೆಚ್ಚಿಸಲು ಮತ್ತು ಪ್ರೋತ್ಸಾಹಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದ್ದು, ಮಹಿಳೆಯರು ಪವಿತ್ರ ಭಗವತ್ ಗೀತೆಯನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಅಭ್ಯಾಸ ಮಾಡಬೇಕು ಮತ್ತು ನಮ್ಮ ಮಕ್ಕಳಿಗೆ ಈ ಪ್ರಾಚೀನ ಬುದ್ಧಿವಂತಿಕೆಯನ್ನು ನೀಡಬೇಕು. ರಾಷ್ಟ್ರಭಕ್ತಿ ಮತ್ತು ಆತ್ಮಶಕ್ತಿ ಹಿಂದೂ ಧರ್ಮ ಮತ್ತು ಸನಾತನ ಸಂಸ್ಕ್ರುತಿಯ ಎರಡು ಪ್ರಮುಖ ಅಂಶಗಳಾಗಿವೆ. ಸನಾತನ ಹಿಂದೂ ಧರ್ಮದ ನಮ್ಮ ಪವಿತ್ರ ಗ್ರಂಥಗಳು ಆಚರಣೆಗಳ ಕಲಿಕೆಯ ಪ್ರಾಮುಖ್ಯತೆಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಿರಣ ಯೆಳ್ಳೂರಕರ್, ರಾಜೇಂದ್ರ ರಾಯ್ಕ, ಚಂದ್ರಕಾಂತ ಕೋಲ್ಕರ್, ಅರ್ಜುನ್ ಗಾವಡೆ, ಅನಂತ್ ಗಾವಡೆ, ಈಶ್ವರ ಸಾನಿಕೋಪ್, ರೋಷನ್ ಸುತಾರ್, ಬಾಳೇಶ್ ಚವ್ಹಾಣ್ಣವರ, ನಾಗೇಶ ರಾಮಾಜಿ, ಅನಿತಾ ಕೊಳಮುಸ್ಕರ, ಗಂಗೂತಾಯಿ ತಳವಾರ, ಕಾವ್ಯಾ, ಡಾ.ಸೋನಾಲಿ ಸರ್ನೋಬತ್ ಅಭಿಮಾನಿ ಬಳಗ ಮತ್ತು ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.