ವಿಜಯಪುರ: ತೋಟದಲ್ಲಿ ಟ್ರ್ಯಾಕ್ಟರ್ ಮೂಲಕ ರೂಟರ್ ಹೊಡೆಯುತ್ತಿರುವಾಗ ಆಯತಪ್ಪಿ ಟ್ರ್ಯಾಕ್ಟರ್ದಿಂದ ಕೆಳಗೆ ಬಿದ್ದು ರೂಟರ್ನಲ್ಲಿ ಸಿಲುಕಿ ಯುವಕ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದಿದೆ. 29 ವರ್ಷದ ಶಿವಾನಂದ ಸಂಗಪ್ಪ ಧನಿಂಗ ಮೃತಪಟ್ಟಿರುವ ದುರ್ದೈವಿ. ಇನ್ನು ರಾತ್ರಿ ತೋಟದಲ್ಲಿ ರೂಟರ್ ಹೊಡೆಯುತ್ತಿರುವಾಗ ಈ ದುರ್ಘಟನೆ ಸಂಭವಿಸಿ ಶಿವಾನಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಅಸುನಿಗಿದ್ದಾನೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.