ವಿಜಯಪುರ: ನಡೆದಾಡುವ ದೇವರು ಲಿಂಗೈಕ್ಯ ಸಿದ್ಧೇಶ್ವರ ಶ್ರೀಗಳ ನೆನಪಿಗಾಗಿ ಅಕ್ಕಿಯಲ್ಲಿ ಸಿದ್ಧೇಶ್ವರ ಶ್ರೀಗಳ ಭಾವಚಿತ್ರ ಬಿಡಿಸಲಾಗಿದೆ.
ವಿಜಯಪುರ ನಗರದ ಮಹಾದೇವಪ್ಪ ದೇವಸ್ಥಾನದಲ್ಲಿ ತುಕಾರಾಂ, ಈರಯ್ಯ ಇಬ್ಬರು ಕೂಡಿಕೊಂಡು ಅಕ್ಕಿಯಲ್ಲಿ ಶ್ರೀಗಳ ಭಾವಚಿತ್ರ ಬಿಡಿಸಿದ್ದಾರೆ. ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕಾಗಿ 50 ಕೆಜಿ ಅಕ್ಕಿಯನ್ನು ಬಳಸಲಾಗಿದೆ. ಶ್ರೀಗಳು ಜ್ಞಾನಯೋಗಿ, ಅನ್ನ ದಾಸೋಹ ಆಗಿದ್ದರು. ಅದಕ್ಕಾಗಿ ಅಕ್ಕಿಯಲ್ಲಿ ಅವರ ನೆನಪಿಗಾಗಿ ಬಿಡಿಸಲಾಗಿದೆ ಎಂದು ತಿಳಿಸಿದ್ದಾರೆ.