ವಿಜಯಪುರ: ಕೆಲವು ತಿಂಗಳಲ್ಲಿ ರಾಜ್ಯ ಚುನಾವಣೆ ಬರುವ ಸಾಧ್ಯತೆ ಇದೆ. ಆದ್ರೇ, ಸಚಿವರಾಗಿ ಎರಡು ತಿಂಗಳಲ್ಲಿ ಏನು ಮಾಡೋದ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಯಾರು ಇದ್ದಾರೆ ಹೇಳಿ ಎಂದರು. ಅಲ್ಲದೇ, ಎರಡು ತಿಂಗಳಲ್ಲಿ ಏನು ಮಾಡೋದ ಇದೆ ಎಂದರು. ಅಲ್ಲದೇ, ಮಾಜಿ ಸಿಎಂ ಸಿದ್ದರಾಮಯ್ಯ ಬದಾಮಿ ಬಿಟ್ಟು ಕೋಲಾರಗೆ ಹೋಗಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಗಾಡಿ ಇದ್ದಂತೆ ಎಂದು ವ್ಯಂಗ್ಯ ಮಾಡಿದರು. ಶಿವ ಪೂಜೆದಲ್ಲಿ ಕರಡಿ ಬಿಡೋದ ಬೇಡ ಎಂದರು.