ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ವಿರುದ್ಧ ವಿಜಯಪುರದಲ್ಲಿ ಬುಧವಾರ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಕಿಡಿಕಾರಿದರು. ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಆಗಿದೆ. ಸರ್ಕಾರ ಜನತೆಗೆ ಏರೋಪ್ಲೇನ್ ತೋರಿಸುತ್ತಿದೆ. ಬಿಜೆಪಿ ಪಕ್ಷ ಅಲ್ಲ ಇದು ಬಿಜಿನೆಸ್ ಜನತಾ ಪಾರ್ಟಿ ಆಗಿದೆ ಎಂದರು.
ಅಲ್ಲದೇ, ರಸ್ತೆ, ಚರಂಡಿ ಸೇರಿದಂತೆ ವಿವಿಧ ಕೆಲಸದಲ್ಲಿ ಹಣ ಒಡೆಯುತ್ತಿದ್ದಾರೆ. ಬಿಜೆಪಿ ಪಕ್ಷ ದೇಶವನ್ನು ಆಳೋಕೆ ಬಂದಿಲ್ಲ ಎಂದು ಕಿಡಿಕಾರಿದರು. ಇನ್ನು ಜಿಹಾದ್ ಹೆಸರಿನಲ್ಲಿ ಕಟೀಲ್ ರಾಜಕೀಯ ಮಾಡುತ್ತಿದ್ದಾರೆ. ಕಟೀಲ್ಗೆ ಯೋಗ್ಯತೆ ಇದೀಯಾ..?ಪಾರ್ಲಿಮೆಂಟ್ ನಲ್ಲಿ ಹೆಜ್ಜೆ ಇಡೋಕ್ಕೆ ಕಟೀಲ್ಗೆ ಯೋಗ್ಯತೆ ಇಲ್ಲ. ಕಟೀಲ್ಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ಮಾಡಿದರು. ಅಲ್ಲದೇ, ಹಿಂದುತ್ವದಲ್ಲಿ ಮಾತ್ರ ಕಟೀಲ್ ಹೋಗುತ್ತಾರೆ. ಮುಸ್ಲಿಂರನ್ನು ದೂರು ಇಡುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು. ಈ ಸಲ ಬದಲಾವಣೆ ಕಾಂಗ್ರೆಸ್ ಪರ ಬರುತ್ತದೆ. ಮಲೆನಾಡು ಭಾಗ ಪ್ರೀತಿ ವಿಶ್ವಾಸದಿಂದ ಇರುತ್ತಿತ್ತು. ಇದೀಗ್ ಧರ್ಮ, ಜಾತಿನಲ್ಲಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಹಿಂದುತ್ವ ಅಜೆಂಡಾ ನೆಲ ಕಚ್ಚಿದೆ ಎಂದರು.
ಸೊರಬದಿಂದ ನಾನು ಕಣಕ್ಕೆ ಇಳಿಯೋದು ಪಕ್ಕಾ. ಪಕ್ಷದಿಂದ ಅರ್ಜಿ ಸಲ್ಲಿಸಿದ್ದೇನೆ. ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುತ್ತದೆ ಎಂದು ಭರವಸೆ ಇದೆ ಎಂದರು. ಸಹೋದರ ಸವಾಲ್ ಇಲ್ಲ. ನಮ್ಮ ಮನೆಯ ಪಂಚಾಯತಿ ನಮ್ಮಪ್ಪನವರು ಮಾಡಿದ್ದಾರೆ. ಸಹೋದರ ಸವಾಲ್ ಬರಿಯೋದು ಬೇಡ. ಸಹೋದರ ಸವಾಲ್ ಕೀಲಿ ನಿಮ್ಮ ಕೈಯಲ್ಲಿ ಕೊಡುವುದು ಕಷ್ಟ ಆಗುತ್ತದೆ. ಸಹೋದರ ಸವಾಲ್ ಅಂದ್ರೇ ಅಪ್ಪಾಜಿ ಅಭಿಮಾನಿಗಳಿಗೆ ನೋವು ಆಗುತ್ತದೆ ಎಂದರು.