ವಿಜಯಪುರ: ಗುಮ್ಮಟನಗರಿ ಖ್ಯಾತಿಯ ವಿಜಯಪುರದಲ್ಲಿ ಮತ್ತೆ ಭೂಮಿ ಕಂಪಿಸಿರುವ ಅನುಭವ ಆಗಿದೆ. ನಗರ ಹಾಗೂ ಹೊರವಲಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜೋರಾದ ಸದ್ದಿನ ಜೊತೆಗೆ ಭೂಮಿ ಕಂಪಿಸಿದೆ. ಇಂದು ಸಂಜೆ
5.56 ಗಂಟೆಗೆ ಭೂಮಿ ನಡುಗಿದ ಅನುಭವ, ಸ್ಪೋಟದ ರೀತಿಯಲ್ಲಿ ಸದ್ದು ಕೇಳಿ ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗೋಳಗುಮ್ಮಟ ಏರಿಯಾ, ಕೀರ್ತಿ ನಗರ, ಜಲನಗರ, ತೊರವಿ, ಗಣೇಶ ನಗರ, ಮಹಲ್ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವಕ್ಕೆ
ಜನತೆ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ, ಮೇಲಿಂದ ಮೇಲೆ ಗುಮ್ಮಟನಗರಿಯಲ್ಲಿ ಭೂಕಂಪನ ಆಗುತ್ತಿದೆ.