ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಇಬ್ಬರು ಹಲ್ಲೆಗೈದಿರುವ ಘಟನೆ ವಿಜಯಪುರ ನಗರದ ಗ್ಯಾಂಗ್ ಬಾವಡಿಯಲ್ಲಿ ನಡೆದಿದೆ.
ಜುಬೇರ್ ಹಲ್ಲೆಗೊಳಗಾದ ಯುವಕ. ಇನ್ನು ಮತ್ತಿಬ್ಬರು ಹಲ್ಲೆಗೈದು ಪರಾರಿಯಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಜುಬೇರ್ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಇದು ಮೀತಿ ಮೀರಿತ್ತು. ಅದಕ್ಕಾಗಿ ಇಬ್ಬರು ಸೇರಿಕೊಂಡು ಜುಬೇರ್ ಮೇಲೆ ಹಲ್ಲೆಗೈದು ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಯುವಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.