ಹುಬ್ಬಳ್ಳಿ: ಹುಬ್ಬಳ್ಳಿ; ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರಿಗೆ ಜನತೆ ಅದ್ಧೂರಿಯಾಗಿ ಸ್ವಾಗತಕೋರಿದ್ದಾರೆ. ಆದ್ರೇ, ಹುಬ್ಬಳ್ಳಿ ಏರ್ಪೋರ್ಟ್ನಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದವರಗೆ ರೋಡ್ ಶೋ ವೇಳೆ ಭದ್ರತಾ ಲೋಪ ಕಂಡುಬಂದಿದೆ. ನಮೋಗೆ ಹಾರ ಹಾಕಲು ಯುವಕನೋರ್ವ ಯತ್ನಿಸಿದ್ದು, ಪೋಲಿಸರು ಕೂಡಲೇ ಅಪರಿಚಿತ ವ್ಯಕ್ತಿಯನ್ನ ಹಿಡಿದಿದ್ದಾರೆ. ಸದ್ಯ ವಿಡಿಯೋ ಎಲ್ಲೇಡೆ ವೈರಲ್ ಆಗುತ್ತಿದೆ.