ವಿಜಯಪುರ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಪ್ರಾಧ್ಯಾಪಕನ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿರುವ ಘಟನೆ ವಿಜಯಪುರದ ಶಾಂತವೀರ ನಗರದಲ್ಲಿ ನಡೆದಿದೆ. ಮನಗೂಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಚಿನಕುಮಾರ ಮಹಾಂತೇಶ ಪಾಟೀಲ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಎಲ್ ಜಿ ಕಂಪನಿಯ 21 ಇಂಚಿನ ಟಿವಿ, ಬಂಗಾರದ ಮಂಗಳ ಸೂತ್ರ, ಜುಮುಕಿ, ಲ್ಯಾಪ್ಟಾಪ್ ಸೇರಿದಂತೆ ಒಟ್ಟು 2.98 ಲಕ್ಷ ರೂ.ಮೌಲ್ಯದ ಸಾಮಗ್ರಿ ಕಳ್ಳತನ ಆಗಿದೆ. ದೇವರ ಕಾರ್ಯಕ್ರಮಕ್ಕೆಂದು ತೆರಳಿದ ವೇಳೆ ಬಾಗಿಲ ಕೀಲಿ ಮುರಿದು ಕಳ್ಳತನಗೈದು ಪರಾರಿಯಾಗಿದ್ದಾರೆ. ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.