ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಮಸ್ತ ಭಕ್ತ ಸಮೂಹದ ಸಹಯೋಗದಲ್ಲಿ ನಡೆದಾಡುವ ದೇವರು ಲಿಂ.ಸಿದ್ದೇಶ್ವರ ಶ್ರೀಗಳಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಮೂಹದಿಂದ ಭಕ್ತಿಪೂರ್ವಕ ನುಡಿ ನಮನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಜನ ದಟ್ಟಣೆ ನಡುವೆಯೇ ವೇದಿಕೆಯ ಮೇಲೆ ಶ್ವಾನವೊಂದು ಆಗಮಿಸಿ, ಶತಮಾನದ ಸಂತ, ಮಹಾನ್ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರದ ಎದುರು ನಿಂತು, ಅಲ್ಲಿಂದ ಎಲ್ಲೂ ಕದಲದೇ ಶ್ರೀಗಳ ನುಡಿ ನಮನದಲ್ಲಿ ಭಾಗವಹಿಸಿತ್ತು. ಶ್ರೀಗಳ ಮೇಲಿನ ಭಕ್ತಿ ತೋರಿ ಶ್ವಾನವೊಂದು ಅಚ್ಚರಿ ಮೂಡಿಸಿತು. ಸಿದ್ದೇಶ್ವರ ಶ್ರೀಗಳಿಗೆ ಸಂಸ್ಥೆಯ ಶಿಕ್ಷಕರ ವೃಂದದೊಂದಿಗೆ ನಮಿಸಿ, ಗೌರವ ಅರ್ಪಿಸಿದರು.