ವಿಜಯಪುರ: ಸಚಿವ ನಿರಾಣಿ ಹಾಗೂ ಶಾಸಕ ಯತ್ನಾಳ್ ಟಾಕ್ ವಾರ್ ಹಿನ್ನೆಲೆ ಇದನ್ನು ಇದನ್ನೆಲ್ಲಾ ಪಕ್ಷದ ಹಿರಿಯ ಗಮನಿಸುತ್ತಿದ್ದಾರೆ ಎಂದು ವಿಜಯಪುರದಲ್ಲಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಪಿ. ರಾಜೀವ್ ಹೇಳಿದರು. ಹೈ ಕಮಾಂಡ್ ಸೂಕ್ತವಾದ ಸಮಯದಲ್ಲಿ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿಜೆಪಿ ಶಿಸ್ತಿನ ಪಕ್ಷವಾಗಿದೆ. ಪಕ್ಷದ ಹೊರಗೆ ಕಾಣುವಂತೆ ಮಾಡುವ ಚಟುವಟಿಕೆ ಶಿಸ್ತು ಅಂತಲ್ಲ. ಶಿಸ್ತು ಪಕ್ಷದೊಳಗೆ ಯಾವ ಪ್ರಮಾಣದಲ್ಲಿ ನಡೆಯಬೇಕು ನಡೀತಾನೆ ಇದೆ. ಔಟ್ ಪುಟ್ ಗಾಗಿ ಕಾಯಿರಿ ಎಂದರು. ಅಲ್ಲದೇ, ಪಕ್ಷದ ಪ್ರಮುಖರು ಗಂಭೀರವಾಗಿ ಇದನ್ನು ತೆಗೆದುಕೊಂಡಿದ್ದಾರೆ. ಅದು ಯಾವಾಗ ಹೊರಗಡೆ ಬರಬೇಕೋ ಬರುತ್ತದೆ ಎಂದರು.