ವಿಜಯಪುರ: ಸ್ಯಾಂಟ್ರೋ ರವಿ ಕೇಸ್ ಸಿಓಡಿಗೆ ವಹಿಸಿದ್ದು ಕಣ್ಣೊರೆಸುವ ತಂತ್ರ ಆಗಿದೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದಲ್ಲಿ ಮಂಗಳವಾರ ಪಂಚರತ್ನ ಯಾತ್ರೆಯ ಬಳಿಕ ಮಾತನಾಡಿದ ಅವರು, ಒಂದು ತಿಂಗಳೊಳಗೆ ಕೇಸ್ ಮುಚ್ಚಿ ಹಾಕ್ತಾರೆ. ಇದರಲ್ಲಿ ಘಟಾನುಘಟಿ ನಾಯಕರಿದ್ದಾರೆ ಎಂದು ಬಾಂಬ್ ಸಿಡಿಸಿದರು. ಅಲ್ಲದೇ, ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ 13 ಸಚಿವರ ಸಿಡಿ ಎಲೆಕ್ಷನ್ ಮುನ್ನ ಬಿಡುಗಡೆ – ಸಿಎಂ ಇಬ್ರಾಹಿಂ ಹೇಳಿಕೆಗೆ ಉತ್ತರಿಸಿದ ಎಚ್ಡಿಕೆ, ಸಿಡಿ ಬಗ್ಗೆ ನಾನು ಮಾತಾಡಲ್ಲ. ಯಾರು ಹೇಳಿದ್ದಾರೋ ಅವರನ್ನೇ ಕೇಳ ಎಂದು ಸಿಎಂ ಇಬ್ರಾಹಿಂರನ್ನು ಕೇಳುವಂತೆ ಹೇಳಿದರು. ಅಲ್ಲದೇ, ಸಿಡಿ ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದರು.