ವಿಜಯಪುರ: ವ್ಯಕ್ತಿಯ ಕೊಲೆ ಮಾಡಿ ಹೂಳಲು ಯತ್ನಿಸರುವ ಘಟನೆ ವಿಜಯಪುರ ನಗರದ ಕೀರ್ತಿ ನಗರದ ಖಬರಸ್ತಾನದಲ್ಲಿ ನಡೆದಿದೆ. ಶಿವರಾಜ ಶಿರಾಳಶೆಟ್ಟಿ ಎಂಬ 34 ವರ್ಷದ ವ್ಯಕ್ತಿಯ ಕೊಲೆ ಮಾಡಿ, ಅರ್ಧಮುರ್ಧ ಮಣ್ಣು ಶವದ ಮೇಲೆ ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಯಾದ ಶಿವರಾಜ ಬಾಗಲಕೋಟ ತಾಲ್ಲೂಕಿನ ಶಿರೂರ ಗ್ರಾಮದವನು.
ಕೊಲೆಯಾದ ವ್ಯಕ್ತಿಯ ಬಳಿ ಇದ್ದ ಲೈಸನ್ಸ್ ಮೇಲೆ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.