ವಿಜಯಪುರ: ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಾಟಕ್ಕೆ ಯತ್ನಿಸಿರುವ ವೇಳೆ ಅಬಕಾರಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದಸೂರ ಗ್ರಾಮದಲ್ಲಿ ನಡೆದಿದೆ. ದಸೂರ ಗ್ರಾಮದ 68 ವರ್ಷದ ಬೋಲೋಬಾ ಜಗತಾಪೆ ಬಂಧಿತ ಆರೋಪಿ. ಇನ್ನು ಬಂಧಿತ ಆರೋಪಿಯಿಂದ 20 ಲೀಟರ್ ಕಳ್ಳಬಟ್ಟಿ ಸಾರಾಯಿ ಜಪ್ತಿಗೈದಿದ್ದಾರೆ. ಇಂಡಿ ಅಬಕಾರಿ ನಿರೀಕ್ಷಕ ಎಂ ಎಚ್ ಪಡಸಲಗಿ ನೇತೃತ್ವದಲ್ಲಿ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸಿಬ್ಬಂದಿಗಳಾದ ಅಶೋಕ ಗೋಣಸಗಿ, ಶಿವಶಂಕರ ಗೋಟ್ಯಾಳ, ಮಂಜುನಾಥ ಬಡಿಗೇರ ಇದ್ದರು. ಈ ಕುರಿತು ಇಂಡಿ ವಲಯ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.