ಮಹಾರಾಷ್ಟ್ರ: ಕಾರು ಹಾಗೂ ಟ್ರಕ್ ಮಧ್ಯೆ ಡಿಕ್ಕಿಯಾಗಿರುವ ಹಿನ್ನೆಲೆ 9 ಜನರು ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ಮುಂಬೈ-ಗೋವಾ
ಹೆದ್ದಾರಿಯಲ್ಲಿ ನಡೆದಿದೆ. ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ವಾಹನ ವಿರುದ್ಧ ದಿಕ್ಕಿನಲ್ಲಿ ಹೋಗಿ ಎದುರಿಗೆ ಬಂದಂತ ಕಾರಿಗೆ ಡಿಕ್ಕಿಯಾಗಿದೆ. ಈ ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿ 9 ಜನರು ಮೃತಪಟ್ಟಿದ್ದಾರೆ. ಅಲ್ಲದೇ, ಗಾಯಗೊಂಡ ಮಗುವನ್ನು ಕಾರಿನಿಂದ ಹೊರತೆಗೆದು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದ ಕಾರಣದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.