ವಿಜಯಪುರ: ಶವ ಸಂಸ್ಕಾರಕ್ಕೆಂದು ಬಂದಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಂಜವ್ವ ಸಾಯಿಲು ಸುನ್ನಮ್ಮ್ (37) ನಾಪತ್ತೆಯಾಗಿರುವ ಮಹಿಳೆ. ಅಲ್ಲದೇ, ಆಂದ್ರಪ್ರದೇಶದಿಂದ ಕೊಲ್ಹಾರಕ್ಕೆ ಸಾಬವ್ವ ಬಳೂತಿಯ ಅಂತ್ಯಕ್ರಿಯೆ ಬಂದಿದ್ದಾಳೆ. ತದನಂತರ ಮರಳಿ ಊರಿಗೆ ಹೋಗದೇ ಮಹಿಳೆ ಅಂಜವ್ವ ಕಾಣೆಯಾಗಿದ್ದಾಳೆ. ಅದಕ್ಕಾಗಿ ಸುತ್ತಮುತ್ತಲಿನ ಕಡೆಗೂ ವಿಚಾರಿಸಿದ್ರೂ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಕೊಲ್ಹಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.