ವಿಜಯಪುರ: ದರೋಡೆಕೋರರ ಗ್ಯಾಂಗ್‌ನಿಂದ ದಾಳಿಗೆ ಒಳಗಾಗಿದ್ದ ವ್ಯಕ್ತಿ ಅಸುನೀಗಿರುವ ಘಟನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ಕಳ್ಳರಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಮನೆ ಮಾಲೀಕ ಸಂತೋಷ ಕನ್ನಾಳ(31) ಸಾವನ್ನಪ್ಪಿದ್ದಾರೆ. ಜನೆವರಿ 16 ರಂದು ರಾತ್ರಿಮನೆ ದರೋಡೆ ಮಾಡುವಾಗ ವಿರೋಧಿಸಿದ್ದ ವೇಳೆ ಚಾಕುವಿನಿಂದ ಇರಿದು ಮಹಡಿ ಮೇಲಿಂದ ಕೆಳಗೆ ಎಸೆದಿದ್ದ ದರೋಡೆಕೋರರು. ಈ ಘಟನೆ ವಿಜಯಪುರದ ಜೈನಾಪುರ ಲೇಔಟ್ ನಲ್ಲಿ ನಡೆದಿತ್ತು. ಎದೆ ಹಾಗೂ ಬೆನ್ನಿಗೆ ಚಾಕು ಹಾಕಿ ಪತ್ನಿ ಭಾಗ್ಯಜ್ಯೋತಿ ಕೊರಳಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದರು. ಅಲ್ಲದೇ, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅಪೋಲೋ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೇ,
ಚಿಕಿತ್ಸೆ ಫಲಕಾರಿಯಾಗದೆ ಸಂತೋಷ ಕನ್ನಾಳ ಮೃತಪಟ್ಟಿದ್ದಾರೆ. ಘಟನೆ ಕುರಿತು ಗಾಂಧಿಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಭಂದಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.