ವಿಜಯಪುರ ಪೊಲೀಸರಿಂದ ನಾಗರಿಕರಿಗೆ ಬಂದೂಕು ತರಬೇತಿ ಶಿಬಿರ

Karnataka 1 News
ವಿಜಯಪುರ ಪೊಲೀಸರಿಂದ ನಾಗರಿಕರಿಗೆ ಬಂದೂಕು ತರಬೇತಿ ಶಿಬಿರ

ವಿಜಯಪುರ: ಜಿಲ್ಲೆಯ ನಾಗರೀಕರಿಗೆ ಆತ್ಮ ರಕ್ಷಣೆ ಹಾಗೂ ಆರೋಗ್ಯಕರವಾದ ಸಮಾಜ ನಿರ್ಮಾಣದ ಸಲುವಾಗಿ ದಿನಾಂಕ: 24-02-2025 ರಿಂದ ದಿನಾಂಕ: 02-03-2025 ರವರೆಗೆ *ನಾಗರೀಕ ಬಂದೂಕು ತರಬೇತಿ* ಶಿಬಿರವನ್ನು ವಿಜಯಪುರ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ನಡೆಸಲು ಉದ್ದೇಶಿಸಲಾಗಿರುತ್ತದೆ. ತರಬೇತಿಯು 07 (ಏಳು) ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 07.00 ಗಂಟೆಯಿಂದ 09.30 ಗಂಟೆಯ ವರೆಗೆ ನಡೆಯುತ್ತದೆ. ತರಬೇತಿಯು ಮುಕ್ತಾಯವಾದ ನಂತರ ಅರ್ಹ ಅರ್ಜಿದಾರರಿಗೆ ಪೊಲೀಸ್ ಅಧೀಕ್ಷಕರು, ವಿಜಯಪುರ ಜಿಲ್ಲೆ ರವರು ತರಬೇತಿ ಪತ್ರವನ್ನು ನೀಡುವರು. ಆಸಕ್ತರು ಪೊಲೀಸ್ ಹೆಡ್ ಕ್ವಾಟ್ರರ್ಸ್ ಆವರಣದಲ್ಲಿರುವ ವಿಜಯಪುರ ಜಿಲ್ಲಾ ಶಸ್ತ್ರಾಗಾರದಲ್ಲಿ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ, ತಮ್ಮ ವಿಳಾಸದ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಪರಿಶೀಲನೆ (ಪೊಲೀಸ್ ವೆರಿಫಿಕೇಶನ್) ಮಾಡಿಸಿ, ವಿಳಾಸದ ಗುರುತಿನ ಚೀಟಿ ಮತ್ತು ಇತ್ತೀಚಿನ 03 ಭಾವಚಿತ್ರಗಳೊಂದಿಗೆ ದಿನಾಂಕ: 20-02-2025 ರ ಒಳಗಾಗಿ ಜಿಲ್ಲಾ ಶಸ್ತ್ರಾಗಾರ ವಿಭಾಗಕ್ಕೆ ಸಲ್ಲಿಸಬೇಕು.

*-: ನಿಬಂಧನೆಗಳು :-*

1. ಅಭ್ಯರ್ಥಿಯು ಭಾರತದ ಪ್ರಜೆ ಮತ್ತು ವಿಜಯಪೂರ ಜಿಲ್ಲೆಯ ಸ್ಥಳೀಯರಾಗಿರಬೇಕು.

2. ಅಭ್ಯರ್ಥಿಯ ವಯಸ್ಸು 18 ವರ್ಷ ಮೇಲ್ಪಟ್ಟವರು ಹಾಗೂ ಆರೋಗ್ಯವಂತರಾಗಿರಬೇಕು.

3. ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನಲೆಯುಳ್ಳವರಾಗಿರಬಾರದು.

4. ತರಬೇತಿಯನ್ನು NON-PROHIBITED ಆಯುಧದಿಂದ ನೀಡಲಾಗುವುದು.

*ಅರ್ಜಿ ಸಲ್ಲಿಸಲು ಕಡೆ ದಿನಾಂಕ:* 20-02-2025.

*ತರಬೇತಿ ನಡೆಯುವ ಸ್ಥಳ:* ಜಿಲ್ಲಾ ಪೊಲೀಸ್ ಕವಾಯತು ಮೈದಾನ, ವಿಜಯಪುರ,

*ಹೆಚ್ಚಿನ ವಿವರಗಳಿಗಾಗಿ:* ಡಿಎಸ್‌ಪಿ ಡಿಎಆರ್ ಘಟಕ, ವಿಜಯಪುರ 9480804206 ಹಾಗೂ ಆರ್‌ಪಿಐ ಡಿಎಆರ್ ಘಟಕ, ವಿಜಯಪುರ 9480804262 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸುವುದು.

ಶ್ರೀ ಲಕ್ಷ್ಮಣ ನಿಂಬರಗಿ, ಐಪಿಎಸ್
ಪೊಲೀಸ್ ಅಧೀಕ್ಷಕರು.
ವಿಜಯಪುರ ಜಿಲ್ಲೆ.

ಗೆ: ಜಿಲ್ಲಾ ವಾರ್ತಾ ಮತ್ತು ಪ್ರಚಾರಾಧಿಕಾರಿಗಳು ಹಾಗೂ ವಿಜಯಪುರ ಜಿಲ್ಲೆಯ ಎಲ್ಲ ಪತ್ರಕರ್ತರು ಹಾಗೂ ಛಾಯಾಗ್ರಾಹಕರುಗಳಿಗೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";